763+ Best Whatsapp Status in Kannada on Life, Friendship & Love for Boys & Girls 2019

Best Whatsapp Status in Kannada :  Hi there, welcome to another article on our blog. In this article you will be reading latest and ultimate collection of  Whatsapp Status in Kannada. So if you are interested to read such statuses, then continue reading this article till the end. Here you will find whatsapp status in KannadaKannada rajyotsava whatsapp status, whatsapp status in Kannada lovewhatsapp status in Kannada love failurewhatsapp status Kannada newwhatsapp status Kannada videos downloadwhatsapp status Kannada song and much more. So let's explore.

Whatsapp Status in Kannada

Latest and  New Whatsapp Status in Kannada :

ಓದಿದಾ ಓದು ತಾ , ವೇದ ಕಬ್ಬಿನ ಸಿಪ್ಪೆಓದಿನಾ ಒಡಲನರಿಯದಿಹರೆ , ಸಿಪ್ಪೆ ಕಬ್ಬಾದಂತೆ ಕಾಣೋ 


ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆಕಟ್ಟಿಹುದು ಬುತ್ತಿ 


ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕುಸಂದ ಸತ್ಪುರುಷ ನೋಡಲಾಗಿ ಪರಬೊಮ್ಮಮುಂದೆ ಬಂದಕ್ಕು ಒಲೆಗುಂಡನೊಬ್ಬನೇ ಮೆಲಬಹುದು ಎಂದಿಹರೆಮೆಲಬಹುದು ಎಂಬವನೆ ಜಾಣ , ಮೂರ್ಖನಗೆಲುವಾಗದಯ್ಯ 

ಎಲೆವಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆತೊಲೆಕಂಬವಿಲ್ಲ ಗಗನಕ್ಕೆ , ದೇವರಲ್ಲಿಕುಲಭೇದವಿಲ್ಲ ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವುಅಚ್ಚಳಿದು ನಿಜದಿ ನಿಂದಂತೆ ಭೇದವನುಮುಚ್ಚುವನೆ ಶರಣ 


ಈಶತ್ರವಿಲ್ಲದಲೆ ಈಶ್ವರನು ಎನಿಸಿಹನೆ ?ಈಶನಾನೀಶನೇನಬೇಡ , ಜಗದಿ ಮಾನೀಶನೇ ಈಶ 


ಅಂಕದರ್ಜುನ ಹೇಡಿ , ಶಂಕರನು ತಿರಿದುಂಡಪಂಕಜನಾಭ ದನಕಾಯ್ದ , ಇನ್ನುಳಿದವರಬಿಂಕಬೇನೆಂದ 


ಒಡಲೆಂಬ ಹುತ್ತಕ್ಕೆ ನುಡಿದ ನಾಲಿಗೆ ಸರ್ಪಕದುರೋಷನೆಂಬ ವಿಶವೇರಿ ಸಮತೆ ಗಾರುಡಿಗನಂತಿಕ್ಕು 
ಅಂಗನೆಯು ಒಲಿಯುವುದು , ಬಂಗಾರ ದೊರೆಯುವುದುಸಂಗ್ರಾಮದೊಳು ಗೆಲ್ಲುವುದು , ಇವು ಮೂರುಸಂಗಯ್ಯನೊಲುಮೆ 


ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲುಭವಿ , ಭಕ್ತ , ಶ್ಚಪಚ , ಶೂದ್ರರಿವರಿಂತೆಂಬಕವನವೆತ್ತಣದೋ


ಎಂಜಲವು ಶಾಚವು , ಸಂಜೆ ಎಂದೆನಬೇಡಕುಂಜರವು ವನವನೆನೆವಂತೆ , ಬಿಡದೆನಿರಂಜನನ ನೆನೆಯೂ ಐವರಟ್ಟಾಳುಗಳ ಯೌವನದ ಹಿಂಡುಗಳುತವಕದಿಂದ ಹೊಯ ನಿಂದಾತ , ಜಗದೊಳಗೆದೈವ ತಾನಕ್ಕು 


ಎಲುತೊಗಲು ನರಮಾಂಸ , ಬಲಿದ ಚರ್ಮದ ಹೊದಿಕೆಹೊಲೆ ರಕ್ತ ಶುಕ್ಲದಿಂದಾದ ದೇಹಕೆಕುಲವಾವುದಯ್ಯ ? 


ಆಕೆಯನು ಕಂಡು ಮನೆ ಆಕೆಯನು ಮರೆದಿಹರೆಹಾಕಿದ ಉರಿಕೆ ಹರಿದಂತೆ , ಮನೆಯೊಳಿದ್ದಾಕೆ ಕೆಡುಗು 


ಅಂಗನೆಯ ಗುಣೆಯಾಗಿ , ಅಂಗಳದಿ ಹೊರಸಾಗಿತಂಗಾಳಿ ಚೊನ್ನದಿರುಳಾಗಿ , ಬೇಸಿಗೆಂದುಹಿಂಗದೇ ಇರಲಿ 


ಊರಿಂಗೆ ದಾರಿಯನು , ಆರು ತೋರಿದೊಡೇನುಸಾರಾಯದ ನಿಜವ ತೋರುವ ಗುರುವು ತಾನಾರಾದರೇನು ? 


ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲಉಳ್ಳಲ್ಲಿ ದಾನ ಕೊಪರೊಲ್ಲದವನೊದವೆಕಳ್ಳನೆ , ನ್ರುಪಗೆ 


ಉದ್ದಿನ ವಡೆ ಲೇಸು , ಬುದ್ಧಿಯ ನುಡಿ ಲೇಸುಬಿದ್ದೊಡನೆ ಕೈಗೆ ಬರಲೇಸು , ಶಿಶುವಿಗೆಮುದ್ದಾಟ ಲೇಸು 
Best Whatsapp Status in Kannada


ಉಣಬಂದ ಜಂಗಮಗೆ ಉಣಬಡಿಸಲೋಲ್ಲದಲೆಉಣದಿಪ್ಪ ಲಿಂಗಕುಣಬಡಿಸಿ , ಕೈ ಮುಗಿವಬಣಗುಗಳ ನೋಡಾ 


ಇಂದ್ರನಾನೆಯ ನೇರಿ ಒಂದನೂ ಕೊಡಲರಿಯಚಂದ್ರಶೇಕರನು ಮುದಿ ಎತ್ತನೇರಿಬೇಕೆಂದುದನು ಕೊಡುವೆ ಇಕ್ಕಿದಾತನು ಉಂಡು , ನಕ್ಕು ಸ್ವರ್ಗಕ್ಕೆ ಹೋದಇಕ್ಕದನು ಹೋದ ನರಕಕ್ಕೆ , ಲೋಕದೊಳ್ಳಗಿಕ್ಕಲೇಬೇಕು 


ಆರು ಬೆಟ್ಟವನೊಬ್ಬ ಹಾರಬಹುದೆಂದರೆಹಾರಬಹುದೆಂದು ಎನಬೇಕು , ಮೂರ್ಕನೊಡಹೋರಾಟ ಸಲ್ಲ 


ಅನ್ನವನು ಇಕ್ಕುವನು ಉನ್ನತವ ಪಡೆಯುವನುಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾಕುನ್ನಿಗೂ ಕಿರಿಯ 


ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡಕಲ್ಲಿನಂತಿಪ್ಪ ಮಾನವನ , ಮನ ಕರಗೆಅಲ್ಲಿಪ್ಪ ನೋಡ 


ಅಡಿಕೆ ಇಲ್ಲದ ವೀಳ್ಯ , ಕಿಡಕಿ ಇಲ್ಲದ ಮನೆಯುಒಡಕು ಬಾಯವಳ ಮನೆವಾರ್ತೇ ಎಣ್ಣೆಯಕುಡಿಕೆಯೊಡೆದಂತೆ 


ಅಂದಕನು ನಿಂದಿರಲು ಮುಂದೆ ಬಪ್ಪರ ಕಾಣಬಂದರೆ ಬಾಯೆಂದೆನದಿರ್ಪ ಗರುವಿಯದಂದುಗವೇ ಬೇಡ 


ಅನ್ಯಸತಿಯನ್ನು ಕಂಡು , ತನ್ನ ಹೆತ್ತವಳೆಂದುಮನ್ನಿಸಿ ನೆಡೆದ ಪುರುಷಂಗೆ , ಇಹಪರದಿಮುನ್ನ ಭಯವಿಲ್ಲ 


ಅನ್ನ ದಾನಗಳಿಂತ ಮುನ್ನ ದಾನಗಳಿಲ್ಲ
ಅನ್ನಕೆ ಮಿಗಿಲು ಇನ್ನಿಲ್ಲ , ಜಗದೊಳಗೆ
ಅನ್ನವೇ ಪ್ರಾಣ 


ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಳ್ಪವರಿಂದ ಕಂಡು ಮತ್ತೆ
ಹಲವಂ ತಾನೆ ಸ್ವತಃಮಾಡಿ ತಿಳಿ ಎಂದ 


ಸರ್ವಜ್ಞ ಎಂಬುವನು ಗರ್ವದಿ೦ ಆದವನೆಎಲ್ಲರ ಬಳಿ ಒಂದು-ಒಂದು ಮಾತನ್ನು ಕಲಿತು
ವಿದ್ಯೆ ಎನ್ನುವ ಪರ್ವತ ಆದ ನಮ್ಮ


ಏಳು ಕೋಟಿಯ ಏಳು ಲಕ್ಷದಏಳು ಸಾವಿರದ ಎಪ್ಪತ್ತು ವಚನಗಳನ್ನು
ಹೇಳಿದಾನೆ ಕೇಳಿ ನಮ್ಮ 


ಮನಸು ಇಲ್ಲದೆ ದೇವಸ್ಥಾನ ಸುತ್ತಿದಲ್ಲಿ ಫಲವೇನುಎತ್ತು ಗಾಣವನು ಹೊತ್ತು ತಾನಿತ್ಯ ವಾಗಿ ಸುತ್ತಿ ಬಂದಂತೆ 


ಮೂರ್ಖನಿಗೆ ಬುದ್ಧಿಯನು ಎಷ್ಟೇ ಕಾಲ ಹೇಳಿದರುಒಂದು ದೊಡ್ಡ ಕಲ್ಲಿನ ಮೇಲೆ ಮಳೆ ಸುರಿದಂತೆಎಷ್ಟು ಸುರಿದರು ಆ ಕಲ್ಲು ನೀರು ಕುಡಿಯುವುದಿಲ್ಲ 


ಸಾಲವನು ಕೊಂಡಾಗ ಹಾಲು ಕುಡಿದಂತೆಸಾಲಿಗನು ಬಂದು ಹಣ ಕೇಳುವಾಗಕಿಬ್ಬದಿಯ ಕಿಲು ಮುರಿದಂತೆ ಎಂದಿದಾನೆ 


ಅನ್ನವನು ನೀಡುವುದು ಸತ್ಯ ವನು ಹೇಳುವುದುತನ್ನ೦ತೆ ಪರರ ನೆನೆದರೆ
ಕೈಲಾಸ ನಿನ್ನದಾಗುವುದು ಎಂದಿದಾನೆ ನಮ್ಮ


ಎಲ್ಲರು ಬಲ್ಲವರಲ್ಲ ಬಲ್ಲವರಿದ್ದರು ಅವರು ಬಹಳ್ಳಿಲಬಲ್ಲವರಿದ್ದರು ಬಲವಿಲ್ಲ
ಸಾಹಿತ್ಯ ಎಲ್ಲರಿಗಲ್ಲ ಎಂದಿದಾನೆ ಕಚ್ಚೆ ಕೈ ಮತ್ತೆ ಬಾಯಿ ಮಾತು ಹತೋಟಿಯಲಿದ್ದರೆವಿಷ್ಣು ಬ್ರಹ್ಮ ನಂತೆ ಲೋಕದಲ್ಲಿಚಿಂತೆ ಇಲ್ಲದೆ ಬಾಳುವನು ಎಂದಿದಾನೆ ನಮ್ಮ 


ಒಳ್ಳೆಯವರ ಮಿತ್ರತೆ ಜೆನಿನಹಾಗೆಕೆಟ್ಟವರ ಮಿತ್ರತೆ ಬಚ್ಚಲಿನಕೊಚ್ಚೆಯ ಹಾಗಿರುತದೆ ಎಂದಿದಾನೆ ನಮ್ಮ


ಸೋಮರಸವನ್ನು ಕುಡಿಯುವನು ಹಂದಿಯಂತೆಹಂದಿಯು ಕೆಲವುಕಡೆ ಉಪಕಾರಿಕುಡುಕ ಹಂದಿಗೂ ಕಡಿಮೆ ಎಂದಿದಾನೆ ನಮ್ಮ ಹೇಳದೆ ಕೊಡುವವನು ಉತ್ತಮನುಹೇಳಿ ಕೊಡುವವನು ಮಧ್ಯಮನುಸುಮ್ಮನೆ ಹೇಳಿ ಕೊಡದಿರುವಂತವನೆ ಅಧಮನು 


ಇರಲು ಮನೆಯು ಖರ್ಚಿಗೆ ಹಣವು
ಇಷ್ಟದಂತೆ ನಡೆವ ಸತಿಯು ಇರಲುಸ್ವರ್ಗವು ಬೇಡದಂತಾಗುವುದು


ಹೂವಿಲ್ಲದೆ ಪೂಜೆಯು ಕುದುರೆ ಇಲ್ಲದ ರಾಜನು
ಭಾಷೆ ಅರಿಯದವಳ ಸಂಗಾತವು
ಪ್ರಯೋಜನಕ್ಕೆ ಬಾರದು ಎಂದಿದಾನೆ ನಮ್ಮ 


ಆರು ಬೆಟ್ಟವನು ಹಾರಿದನು ಎಂದರೆ
ಅವನು ಹಾರಿದ ಎಂದು ಒಪ್ಪಬೇಕು ಮೂರ್ಖರ ಬಳಿ
ಜಗಳ ಬೇಡ ಇಂತಿ Whatsapp Status in Kannada New

ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು. 


ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ. 


ದೇವರ ವಾಕ್ಯವನ್ನು ಕೇಳಿಸಿಕೊಂಡು ಅದರಂತೆ ನಡೆಯುತ್ತಿರುವವರೇ ಸಂತೋಷವಾಗಿರುವವರು 


ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರಬೇಕು. ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ. 


ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವರಾಗಿರುವೆನು. ನೀವು ನನ್ನ ಜನರಾಗಿರುವಿರಿ. 


ನಾನು ಒಳ್ಳೆಯ ಕುರುಬನು. ಒಳ್ಳೆಯ ಕುರುಬ ತನ್ನ ಕುರಿಗಳಿಗಾಗಿ ಪ್ರಾಣವನ್ನು ಕೊಡುತ್ತಾನೆ. 


ದೇವರಿಗೆ ಭಯಪಟ್ಟು ಆತನ ಆಜ್ಞೆಗಳ ಅನುಸಾರ ನಡೆಯಿರಿ. 


ಶಾಂತಿಯನ್ನು ಒದಗಿಸುವ ದೇವರು ಬೇಗನೆ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ಹಾಕಿ ಜಜ್ಜಿಬಿಡುವನು. 


ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು. 


ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ; ಆತುರಪಡುವ ಪ್ರತಿಯೊಬ್ಬನಿಗೆ ಕೊರತೆ. 


ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.” 


ಚಿಂತೆಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ಸ್ವಲ್ಪವಾದರೂ ಹೆಚ್ಚಿಸಿಕೊಳ್ಳಬಲ್ಲನು? ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ. ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು. ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ. 


ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ ತನ್ನ ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು. 
Whatsapp Status in Kannada 2019


“ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.”

“ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ? ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ ‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು ಕೊಟ್ಟೆ ಹುಟ್ಟಿಸಿದ್ದಾನೆ ಎಂತ ತಿಳಿಯಬೇಕು.”

“ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜೊತೆ ಒಳ್ಳೆಯ ರೀತಿಯಿಂದ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ?”

“ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.”

“ಮನುಷ್ಯ, ಸಮಾಜದ ಋಣವನ್ನು ಹೊತ್ತುಕೊಂಡು ಬಂದಿದ್ದಾನೆ. ಅದರ ಋಣದಿಂದಲೇ ಬೆಳೆಯುತ್ತಾನೆ. ನಾಳೆ ದಿನ ಸಾಯುವಾಗ ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಸಲ್ಲಿಸಿ ಹೋದರೆ ಆತ ಹುಟ್ಟಿದ್ದಕ್ಕೊಂದು ಸಾರ್ಥಕ. ಇಲ್ಲವಾದರೆ ಅವನ ಜನ್ಮದಿಂದ ಸಮಾಜಕ್ಕೆ ನಷ್ಟ.”

“ಎಷ್ಟೋ ಬಾರಿ ಅಳುವೆಂಬುದು ನಗುವಿಗಿಂತಲೂ ಸುಖದ ವಸ್ತು. ಎದೆಯ ಭಾರವನ್ನು ಅದು ಇಳಿಸಿದಷ್ಟು, ಮನಸ್ಸಿನ ಕಲ್ಮಶವನ್ನು ಅದು ತೊಳೆದಷ್ಟು, ಪಾಪವನ್ನು ಕಿತ್ತು ಅದು ಶುಚಿ ಮಾಡಿದಷ್ಟು ತೀರ್ಥ ಪ್ರಸಾದಗಳು ಮಾಡಲಾರವು.”
“ಮುಖ್ಯವಾಗಿ ಹೆಣಗಳಲ್ಲಿರುವ ಭೇದವು ಎರಡೇ. ಜೀವ ಇರುವುದು, ಜೀವ ಇಲ್ಲದಿರುವುದು. ಪ್ರಾಣ ಹೋದರೆ ಮೊದಲನೆಯ ವರ್ಗಕ್ಕೆ ಸೇರಿಸಿ ಬಿಡುತ್ತಾರೆ. ಹಣ ಹೋದರೆ ಎರಡನೆಯ ವರ್ಗಕ್ಕೆ ದಾಖಲು ಮಾಡುತ್ತಾರೆ.”

“ಕೊಳೆಯೇ ಕಾಣದ ಲೋಕವಿಲ್ಲ. ಕೊಳೆಯಿಲ್ಲದ ದೇಹವಿಲ್ಲ. ಬಂದ ಕೊಳೆಯನ್ನು ಆಗಾಗ ತೆಗೆದುಕೊಳ್ಳುವುದೇ ಚೊಕ್ಕತನದ ಲಕ್ಷಣ.”
“ಮಕ್ಕಳಿಗಾಗಿ ಆಸ್ತಿ ಮಾಡಿಡ ಬೇಡಿ! ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ..”
“ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ.”


Whatsapp Status Quotes in Kannada

“ನಮ್ಮ ಹಾಗೆಯೇ ಸಾವಿರ, ಸಾವಿರ ಅಲ್ಲ, ಕೋಟಿ, ಕೋಟಿ ಪ್ರಾಣಿಗಳಿವೆ. ಅವು ಯಾವುದಾದರೂ, ಯಾರನ್ನಾದರೂ ಬೇಡುವುದನ್ನು ಕಂಡಿದ್ದೀಯಾ? ಮತ್ತೆಲ್ಲ ಬಿಡು- ಅವು ತಮ್ಮ ಅನ್ನವನ್ನು ಬೇಡುವುದಿಲ್ಲ; ಮಲಗಲು ತಾವನ್ನೂ ಬೇಡುವುದಿಲ್ಲ; ಹುಲ್ಲೆಯೆದುರಿಗೆ ಹುಲಿ ಬಂದರೆ ‘ಸಹಾಯ ಮಾಡು’ ಎಂತಲೂ ಬೇಡುವುದಿಲ್ಲ. ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾದರೆ ಹೇಗೆ?”


“ನಮ್ಮ ಅಲ್ಪತನ ನಮಗೇ ಕಾಣಿಸುವುದಿಲ್ಲ. ನಮ್ಮಲ್ಲಿ ಇರುವ ಅಥವಾ ಇಲ್ಲದ ಸ್ವಲ್ಪ ಗುಣಗಳು ಬಹಳ ದೊಡ್ಡದಾಗಿಯೇ ಕಾಣಿಸುತ್ತವೆ.”


“ಬಯಕೆಯ ಕುಡಿ ಎಷ್ಟೆಷ್ಟು ನಿರಾಸೆಯಲ್ಲಿ ಬೆಳಯುತ್ತದೋ, ಅದರ ಬೇರು ಅಷ್ಟಷ್ಟು ಬಲವಾಗಿ ಮನದಲ್ಲಿ ಊರಿಕೊಳ್ಳುತ್ತದೆ. ಅದೇ ಚಿಂತನೆಯನ್ನು ಮಾಡುತ್ತ, ತನಗೆ ಇಲ್ಲದ ವಸ್ತುವಿಗಾಗಿ ಅಸೂಯೆಗೊಳ್ಳುತ್ತದೆ. ತನಗೆ ದೊರೆಯದ ಸುಖ ಅನ್ಯರಿಗೆ ದೊರಕುವುದನ್ನು ಕಂಡು ಸುಪ್ತ ಮನಸ್ಸು ಊಹೆಗೆ ಶರಣಾಗುತ್ತದೆ. ಜೊತೆಗೆ ಅನ್ಯಾಯಗಾರರಾರೆಂಬುವವರನ್ನು ದಂಡಿಸಲು ಧೈರ್ಯ ಕೊಡುತ್ತದೆ.”


“ಹಣದ ಶಕ್ತಿಯು ವಿಮರ್ಶೆಯ ಬಾಯಿಯನ್ನು ಅದುಮಿ ಹಿಡಿದಿದೆ. ಜಾಹಿರಾತಿಗಾಗಿ ಬಾಯಿ ಬಿಡುವ ಪತ್ರಕರ್ತರು ನಿರ್ಬೀತ ವಿಮರ್ಶೆಯನ್ನೇನು ಮಾಡಬಲ್ಲರು???”


“ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು.”
“ಬಾಳು ಇರುವುದು ಬದುಕುವುದಕ್ಕಾಗಿ;  ಬದುಕಿ ಬೆಳೆಯುವುದಕ್ಕಾಗಿ.. “


“ಯಾವೊಬ್ಬನ ಜೀವನದ ತೀರ್ಮಾನವೂ ಇನ್ನೊಬ್ಬನ ಬದುಕಿನ ತೀರ್ಮಾನವಾಗಲಾರದು.”


“ತನ್ನಲ್ಲೇ ಪ್ರಾಮಾಣಿಕತೆ ಇಲ್ಲದಿದ್ದರೆ ಲೋಕದ ಉದ್ಧಾರಕ್ಕೆ ಪ್ರಯತ್ನಿಸುವುದು ಬೇಡ. ಉಪದೇಶ ಮಾಡುವ ಬದಲು ತಾವೇ ಅನುಸರಿಸಿದರೆ ಪ್ರಯೋಜನವಾದೀತು.”


“ಜನ ಆದರ್ಶವಾದಿಗಳನ್ನು ಪೂಜಿಸುವುದರಲ್ಲಿ ತೃಪ್ತರು, ಅನುಸರಿಸುವುದರಲ್ಲಿ ಯಾವಾಗಲೂ ಹಿಂದೆಯೇ”“ಮನೋದೌರ್ಬಲ್ಯಕ್ಕೂ ಒಂದು ಮಿತಿ ಇರಬೇಕು. ಒಂದು ಗಳಿಗೆಯ ಉನ್ಮತ್ತತೆಯಿಂದ ಯಾವಜ್ಜೀವನದ ಭವಿಷ್ಯ ನಿರ್ಧರಿಸುವುದು ತಪ್ಪು. ಆದರ್ಶಕ್ಕಾಗಿ, ತನ್ನವರಿಗಾಗಿ, ಜನಕ್ಕಾಗಿ ವ್ಯಕ್ತಿ ಸುಖವನ್ನು ಮರೆಯಲಾರದೆ ಹೋದರೆ ಬಾಳ್ವೆಗೆ ಚೆಲುವು ಬರಲಾರದು. ಮನುಷ್ಯನ ಉದ್ಯೋಗಕ್ಕೂಆದರ್ಶಕ್ಕೂ ಪರಸ್ಪರ ಹೊಂದಾಣಿಕೆ ಬಾರದೆ ಹೋದಲ್ಲಿ ಜೀವನದಲ್ಲಿ ಸುಖ ಸಿಗಲಾರದು. ಆರಿಸಿದ ಬಾಳ್ವೆಯನ್ನು ಚೆನ್ನಾಗಿ ಮಾಡಿಕೊ, ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡಿಯುವುದಕ್ಕೆ. ಬಾಳು ಬೆದರುವುದಕ್ಕಾಗಿಯಲ್ಲ. ಬದುಕುವುದಕ್ಕಾಗಿ.”


Whatsapp Status in Kannada Life

“ನಂಬುವುದರಿಂದ ನಾವೇನನ್ನೂ ಕಳೆದುಕೊಳ್ಳುವುದಿಲ್ಲ. ಅಪನಂಬಿಕೆಯಂಥ ಅಪಾಯಕಾರಿ ಜೊತೆಗಾರನಿಲ್ಲ.”

“ನಮ್ಮಲ್ಲೆಲ್ಲ ಹೆಣ್ಣು ತರುವುದೇ ಪದ್ಧತಿ. ಎಮ್ಮೆ, ದನ, ನಾಯಿ, ಕರುಗಳನ್ನು ತರುವ ಹಾಗೆ. ಅದೊಂದು ಸಂಪ್ರದಾಯ. ನನಗೆ ಸಂಪ್ರದಾಯದ ಮದುವೆ ಬೇಕಿರಲಿಲ್ಲ. ತಿಳಿದು ಮದುವೆಯಾಗಬೇಕು. ಗಂಡಿಗೆ ಹೆಣ್ಣಿನ ಪರಿಚಯವಾಗಬೇಕು. ಮೊದಲಿಗೆ ಇಬ್ಬರೂ ಸ್ನೇಹಕ್ಕೆ ಒಲಿಯಬೇಕು. ಇದು ಕಷ್ಟದ ದಾರಿ. ಜನರು ತಿಳಿದಷ್ಟು ಸುಲಭವಲ್ಲ.”

“ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ? ಆ ಪ್ರಶ್ನೆಗೆ ಉತ್ತರವಾಗಿ ಅವರವರ ಕರ್ಮ ಅವರವರಿಗೆ ಎಂದರೆ ಸಾಕೇನು? ಜೀವನ ಪ್ರವಾಹದ ಕರ್ಮಕಾಂಡ ವ್ಯಕ್ತಿಗೆ ಬದ್ಧವಾದ, ವ್ಯಕ್ತಿಯಿಂದ ವ್ಯಕ್ತಿಗೆ ಪ್ರಭಾವಿತವಾಗುವ ಸಾಮೂಹಿಕ ಕರ್ಮಕಾಂಡ. ಆ ಸಮೂಹದ ಒಳಿತು ಕೆಡುಕುಗಳ ಪಾಲು ಮತ್ತು ಹೊಣೆ ಪ್ರತಿ ವ್ಯಕ್ತಿಯ ಪಾಲಿಗೆ ಇದ್ದೇ ಇದೆ.”

“ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕೀತೆ ಎಂದು ಅರಸಬೇಕು.”
“ಕನ್ನಡದ ಮಕ್ಕಳಿಗೆ ಹಿಂದಿ, ಸಂಸ್ಕೃತಗಳ ರೂಢಿಯಿಲ್ಲ, ಹಾಗಾಗಿ ಅವರಿಗೆ ‘ಭಾರತ ಮಾತೆ’ ಎಟುಕದ ವ್ಯಕ್ತಿ. ಅವಳ ಸಲುವಾಗಿ ಮಕ್ಕಳ ಬಾಯಿಯಿಂದ ‘ಭರತ್ ಮತಾ ಕೀ ಜೈ’ ಅನ್ನಿಸುವಾಗ ನಗು ಬರುತ್ತದೆ. ‘ತಾಯಿಯೇ ನಿನಗೆ ನಮಸ್ಕಾರ’ ಎಂಬ ಅರ್ಥದ ಮಾತುಗಳನ್ನು ‘ವಂದೇ ಮಾತರಮ್’ ಎಂದು ವಿನಯ ರಹಿತವಾಗಿ ‘ಜೋ ಹುಷಾರ್’ ಎಂಬಂತೆ ಸಾಮೂಹಿಕವಾಗಿ ಒದರಿಸುವುದನ್ನು ಕೇಳಿದಾಗ ದುಃಖವಾಗುತ್ತದೆ.”
“ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕಂತಿದ್ದೀರೋ ಹಾಗೆ ಬದುಕಿ ತೋರಿಸಿ.”
“ನಮಗಿಂತ ಒಳ್ಳೆಯ ಸ್ಥಿತಿಯಲ್ಲಿರುವವರನ್ನು ಕಂಡು ಅವರನ್ನ ದ್ವೇಷಿಸಿ ಅಸೂಯೆ ಪಡುವುದೇ ಇಂದಿನ ಯುಗಧರ್ಮವಾಗಿದೆ”
“ಯಾವ ಉದ್ದೇಶಕ್ಕಾಗಿ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಿದೆವೋ, ಅವೆಲ್ಲ ಮಣ್ಣುಪಾಲಾಗಿದೆ. ಎಲ್ಲರಿಗೂ ಅನ್ನ ಕೊಡ್ತೀವಿ ಅಂತ ಹೇಳಿ ಅನ್ನ ಕಿತ್ತುಕೊಳ್ಳುತ್ತಿದ್ದೇವೆ. ಅದರಲ್ಲೂ ವಿದ್ಯಾವಂತರೇ ಈ ಕೆಲಸದಲ್ಲಿ ತೊಡಗಿರುವಿದು ನೋಡಿದರೆ ಅತೀವ ದುಃಖವಾಗುತ್ತದೆ.”

“ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.”

“ತನ್ನ ಮನೆಯಲ್ಲೇ ಚೆಲುವನ್ನು ಗುರುತಿಸಲಾರದವ ಲೋಕದ ಸೌಂದರ್ಯವನ್ನು ಮೆಚ್ಚಲು ಸಮರ್ಥನಾಗುವುದು ಕಷ್ಟವೇ ಸರಿ.”


Whatsapp Status in Kannada for Life

“ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಯತ್ನಿಸುತ್ತಾರೋ, ಅವರು ತಮ್ಮ ಸುಖವನ್ನೂ ಹೆಚ್ಚಿಸಿಕೊಳ್ಳುತ್ತಾರೆ.”

“ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ಬಯಸಿದರೆ ಸಹರಾ ಮರುಭೂಮಿಯಲ್ಲಿ ಓಯಸಿಸ್ ಹುಡುಕುವಷ್ಟು ಕಷ್ಟವಾದೀತು. ಮನುಷ್ಯ ಬಾಳಬೇಕಾದರೆ ಆ ಓಯಸಿಸ್ಸನ್ನು ಹುಡಕಲೇ ಬೇಕಲ್ಲ!!”

“ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “

“ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ.”“ಸ್ವರ್ಗ, ನರಕ ಆರಿಸಿ ಹೋಗುವ ಜನ್ಮ ಬೇಕಿಲ್ಲ. ಇಲ್ಲಿ ಬದುಕಿನಲ್ಲಿ ನಗು, ನೋವು, ಸಂಕಟಗಳು ಸಾಕಷ್ಟು ಇರುವಾಗ ಸ್ವರ್ಗದಲ್ಲಿ, ನರಕದಲ್ಲಿ ಅಂತಹ ವ್ಯವಸ್ಥೆ ಇರಬೇಕಾದದ್ದು ಯಾರ ಸಲುವಾಗಿ?”“ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವ ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕ ಬಲ್ಲ”
“ನಾವು ಎಷ್ಟೇ ಬುದ್ಧಿವಂತರಾಗಿದ್ದರೂ, ನಾವು ಎಷ್ಟೇ ಸರಿಯಿದ್ದರೂ, ಒಂದೊಂದು ಜೀವವು ತಾನು ಕಂಡುಕೊಂಡ ಬೆಳಕಿನಲ್ಲಿ ನಡೆಯುವುದೇ ನ್ಯಾಯ. ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ ನಾವು ಸಲ್ಲಿಸಬೇಕಾದ ಋಣವೆಂದರೆ ಅದು. ಇದೇ ಖಂಡಿತ, ಅದೇ ಖಂಡಿತ ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ ಅವರ ವಾಣಿಯನ್ನು ನಿರ್ಬಂಧಿಸುವುದು ಸಮಾಜಘಾತುಕತನ.”
“ಯಾವ ನಾಡೂ ಒಬ್ಬ ಹುಟ್ಟಿದ ಊರಿನ ಸೊಗಸಿಗೆ ಸಾಟಿಯಾಗದು..”


“ನೀವು ಪಾಲಿಸದ ಉಪದೇಶ ಖಂಡಿತ ಮಾಡಬೇಡಿ. ಅದು ಒಂದು ಪೈಸಕ್ಕೂ ಬೆಲೆ ಇಲ್ಲದ್ದು. ಉಪದೇಶ ಮಾಡೋ ಪುಸ್ತಕ ಕೊಡಿ ಓದಿಕೊಳ್ತಾರೆ. ಅದಕ್ಕೆ ನೀವೇ ಬೇಕಿಲ್ಲ. ನೀವು ನಡೆದು ತೋರಿಸಿ ಅದು ಮಾಡೋ ಪರಿಣಾಮ ಬೇರೆ ಯಾವುದೂ ಮಾಡಲ್ಲ.”


Whatsapp Status in Kannada Must Read

“ಮನುಷ್ಯ ಬದುಕುವ ಮಿತಿ ನೂರು ವರ್ಷ ಎಂದು ತಿಳಿಯುವ. ಆದರೆ ಅವನು ಸಂಪತ್ತು ಕೂಡಿಹಾಕುವ ಬಗೆಯನ್ನು ಕಂಡುದಾದರೆ, ತನ್ನ ಗಳಿಮೆಯು ಮುಂದಿನ ಮೂರು ಶತಮಾನದ ಜನರಿಗೂ ಸಿಗಬೇಕೆಂದು ಬಯಸುವಂತೆ ಕಾಣುತ್ತದೆ. ಇದರಿಂದ ಅವನ ಸಂತಾನ, ನ್ಯಾಯವಾಗಿ ದುಡಿಯಬೇಕಾದಷ್ಟು ಶ್ರಮಿಸುವುದಿಲ್ಲ. ನಮ್ಮ ಅತಿ ಗಳಿಕೆಯಿಂದ ನಮ್ಮ ಆಚೀಚಿನ ಅನೇಕರ ಸುಖಗಳು ಇಲ್ಲದಾಗುತ್ತದೆ. ಅಲ್ಲದೆ, ಬಾಳ್ವೆಗೆ ಬಲವಾಗಿ ಅಂಟಿದಾತನೂ, ಅದರ ಮಿತಿಯನ್ನು ಮನಗಾಣದಾತನೂ, ಸಾವಿನ ಭೀತಿಗೆ ಗುರಿಯಾಗಬೇಕಾಗುತ್ತದೆ.”
“ನಾಳೆ ಏನೆಂಬ ಪ್ರಶ್ನೆಗಿಂತಲೂ ‘ಇಂದು ಹೇಗೆ?’ ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು.”
“ವ್ಯಕ್ತಿ ‘ಚಿಹ್ನೆ’ ಉಳಿಯುವುದೂ ಅಳಿಯುವುದೂ ಅವನ ಚರಿತ್ರೆಯಿಂದ. ಆ ಚರಿತ್ರೆ ನಮ್ಮ ನಮ್ಮ ಸ್ಮರಣೆಗಳನ್ನು ಚೇತನಗೊಳಿಸಿ ನಮ್ಮ ಬದುಕಿನ ಮೂಲಕ ಜೀವಂತವಾಗಿ ಉಳಿದರೆ, ಬೆಳೆದರೆ, ಮುಂದೆ ಸಾಗಿದರೆ, ಅದೇ ಪುನರ್ಜನ್ಮ.”

“ಮಕ್ಕಳ ಶಕ್ತಿಯನ್ನು ತಿಳಿದುಕೊಂಡರೆ ಮಾತ್ರ ಅವನ್ನು ಬೆಳೆಯಿಸಬಲ್ಲ ದಾರಿಗಳು ನಮಗೆ ಗೊತ್ತಾಗುತ್ತವೆ. ಅವನ್ನು ತಿಳಿಯದೆ ಮಾಡುವ ಉಪಚಾರಗಳೋ, ಹಬ್ಬಗಳೋ ದೊಡ್ಡವರ ಹೆಮ್ಮೆಯನ್ನು ತಣಿಸುವುದಕ್ಕೆ ಸಾಕಾಗುತ್ತವೆ.”

“ಮನುಷ್ಯ ಬಲಿಯಲು, ಅರಳಲು ಅವನ ಶಕ್ತಿಗಳು ಇನ್ನೆಷ್ಟೋ ಹೆಚ್ಚಿಗೆ ಬೆಳೆಯಬೇಕು. ಅವು ಎಷ್ಟೂ ಬೆಳೆಯಬಹುದು. ಅನುದಿನ ಆಫೀಸು ಕುರ್ಚಿಯಲ್ಲಿ ಸ್ವರ್ಗವನ್ನು ಕಾಣ ಬಯಸುವವನು ಬಯಲಲ್ಲಿ ಓಡಾಡಲು, ಹಳ್ಳಗುಡ್ಡಗಳಲ್ಲಿ ತಿರುಗಾಡಲು, ಸಂಜೆ ಮುಂಜಾನೆಗಳಲ್ಲಿ ದಿಗಂತವನ್ನು ನೋಡಲು ಕಲಿಯಬೇಕು. ವಿರಾಮ ದೊರೆತಾಗಲೆಲ್ಲ, ಅನುಕೂಲತೆ ಒದಗಿದಾಗಲೆಲ್ಲ ಕಡಲ ತೀರದ ಮೇಲೆ ಹಾಯಾಗಿ ಮಲಗುವುದಕ್ಕೋ, ಬೆಟ್ಟದ ತುದಿಯ ಮೇಲೆ ಮೌನವಾಗಿ ಕುಳಿತಿರುವುದಕ್ಕೋ, ಗಿಡಮರಗಳ ಎಡೆಯಲ್ಲಿ ಕಣ್ಣನ್ನು ಹಕ್ಕಿಯಿಂದ ಹೂವಿಗೂ, ಹೂವಿಂದ ಹಕ್ಕಿಗೂ ಹೊರಳಿಸುವುದಕ್ಕೋ ಕಲಿಯಬೇಕು. ಪ್ರತಿಯೊಮ್ಮೆಯೂ ನಮ್ಮ ಜೀವನ ಇದರಿಂದ ವಿಸ್ತರಿಸೀತು. ತಾಳ್ಮೆ ಔದಾರ್ಯಗಳು ಬೆಳೆದಾವು. ನಿಸರ್ಗದ ರಾಗಾಲಾಪದಲ್ಲೋ, ರೂಪರೇಖೆಯಲ್ಲೊ ಮೇಳವಿಸದ ಸ್ವರ, ನಡೆಗಳು ಇಂಥವೇ ಎಂದು ತಿಳಿಯಲು ಅವನು ಶಕ್ತನಾದಾನು. ಅಲ್ಲಿಯ ಜೀವನವನ್ನು ಕಂಡು ಮನುಷ್ಯನು ಮನುಷ್ಯ-ಸಮಾಜದ ಕೃತಕ ನೀತಿಯ ನೆಲೆ ಎಷ್ಟು ಭದ್ರವಾಗಿದೆ ಎಂದು ಅಳೆಯುವುದಕ್ಕೂ ಕಲಿತಾನು.”

“ಬಾಳಿನಲ್ಲಿ ಮನುಷ್ಯ ಪಡೆಯಬಹುದಾದ ಎಲ್ಲ ಸಂಪತ್ತಿಗಿಂತ ಮಿಕ್ಕಿದ ಸಂಪತ್ತು ತಾಯ್ತನವಲ್ಲವೇ? ಶಿಶುವಿಗೆ ಮೊಲೆಯುಡಿಸುವ ಗಳಿಗೆಯಿಂದ, ಅದನ್ನು ಬೆಳೆಸಿ ಪ್ರಬುದ್ಧನನ್ನಾಗಿ ಮಾಡಿ, ಪ್ರಪಂಚಕ್ಕೆ ಒಪ್ಪಿಸುವ ಹೊಣೆ ಎಷ್ಟು ಹೆಚ್ಚಿನದೋ ಆ ಹೊಣೆಯ ನಿರ್ವಹಣೆಯ ಭಾಗ್ಯವೂ ಹೆಚ್ಚಿನದಲ್ಲವೆ?”

“ದೇಶ ದೊಡ್ಡದಾಗಬೇಕಾದರೆ, ಊರಿನ ಜನ ದೊಡ್ಡವರಾಗಬೇಕು. ನಮ್ಮಲ್ಲಿ ಅದೇ ಕಾಣಿಸದಾಗಿದೆ. ನಾವೆಷ್ಟು ಹೆಮ್ಮೆ ತಾಳಿದರೇನು? ನಮ್ಮ ಶೀಲವೇ ನಷ್ಟವಾಗಿರುವಲ್ಲಿ…”
“ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ…”

“ಗಾಂಧೀಜಿಯವರು ದೇಶದಲ್ಲಿ ರಾಮರಾಜ್ಯವನ್ನು ಕಟ್ಟಬೇಕೆಂದು ಹಂಬಲ ತೊಟ್ಟರು. ಅವರ ಜೊತೆಗೆ ನಾಲ್ಕು ದಿನ ಕುಣಿದ ನಾನೂ ಅಂತ ಹಂಬಲವನ್ನು ತೊಟ್ಟದ್ದುಂಟು. ಈಗ ಎಣಿಕೆ ಹಾಕುವಾಗ, ನನ್ನ ಕಾಲಕ್ಕೆ ಮಾತ್ರವಲ್ಲ, ನನ್ನ ಮೊಮ್ಮಕ್ಕಳ ಕಾಲಕ್ಕೂ ಆ ರಾಮರಾಜ್ಯವೆಂಬುದು ಬರಲಾರದು ಅನಿಸುತ್ತದೆ – ನಾವು ತಂದ ಹರಾಮರಾಜ್ಯವನ್ನು ಕಾಣುವಾಗ”

“ಮನುಷ್ಯನ ಉದ್ಯೋಗಕ್ಕೂ ಆದರ್ಶಕ್ಕೂ ಪರಸ್ಪರ ಹೊಂದಿಕೆ ಬಾರದೆ ಹೋದಲ್ಲಿ ಜೀವನದಲ್ಲಿ ಸುಖ ಸಿಗಲಾರದು.”

“ನಮ್ಮ ಸ್ವಾರ್ಥವೇ ನಮ್ಮ ಅಳತೆಯ ಕೋಲು; ನಮ್ಮ ಸುಖ-ದು:ಖ, ಲಾಭ-ನಷ್ಟಗಳ ದೃಷ್ಟಿಯೇ ಬಳಸುವ ತೂಕದ ಕಲ್ಲುಗಳು. ಇತರರು ನಮಗೆ ಒಳ್ಳೆಯವರಾಗಿ ಕಾಣಿಸುವುದು ಬಿಡುವುದು ಇವುಗಳಿ೦ದಲ್ಲವೇ?”Whatsapp Status in Kannada Download


1) ನಿನ್ನ ಕನಸು ನನಸಾಗಬೇಕಿದ್ದರೆ.. ಮೊದಲು ನೀನು ಕನಸು ಕಾಣು..


2) ನಿದ್ದೆಯಲ್ಲಿ ಕಾಣುವುದಲ್ಲ .. ನಿದ್ದೆಗೆಡಿಸಿ ಕಾಡುವುದು


3) ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ


4) ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು..


5) ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ ..


6) ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು..


7) ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ..


8) ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ..


9) ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ


10) ಯುವಕರು ಕೆಲಸ ಹುಡುಕಬಾರದು.. ಕೆಲಸ ಉತ್ಪಾದಕರಾಗಬೇಕು


11) ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು


12) ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ. ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸ್ತೀರಿ ಎನ್ನುವುದು ಮುಖ್ಯ


13) ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ. ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ


14) ನಮಗೆಲ್ಲರಿಗೂ ಒಂದೇ ಪ್ರತಿಭೆ ಹೊಂದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ


15) ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು


16) ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ. ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ, ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ


17) ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟWhatsapp Status in Kannada on Friendship


ಬದುಕಿನ ಒಂದು ವಿಚಿತ್ರ ನಿಯಮ..ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ..ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ…ಜೀವನ ಎಲ್ಲರಿಗೂ ಸಿಗಲೇಬೇಕೆನ್ನುವುದು ಅವಶ್ಯಕವಲ್ಲ, ಸ್ನೇಹ ಎಲ್ಲರಿಗೂ ಸಿಗಬೇಕೆನ್ನುವುದು ಅವಶ್ಯಕವಲ್ಲ ಕೆಲವೊಂದು ವ್ಯಕ್ತಿಗಳು ನಮಗೆ ತುಂಬಾ ಕಾಡುತ್ತಿದ್ದರೂ, ನಾವು ಅವರಿಗೆ ನೆನಪಿಗೆ ಬರಬೇಕೆನ್ನುವುದು ಅವಶ್ಯಕವಲ್ಲಶುದ್ದ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..ಒಂದು ನಿಜವಾದ ಸ್ನೇಹಿತ ಮುಕ್ತವಾಗಿ, ಯುಕ್ತವಾಗಿ ಸಲಹೆ ಸುಲಭವಾಗಿ ಸಹಾಯ, ಸಾಹಸಗಳನ್ನು ಧೈರ್ಯದಿಂದ ಎಲ್ಲಾ ತಾಳ್ಮೆಯಿಂದ ತೆಗೆದುಕೊಳ್ಳುತ್ತದೆ, ಧೈರ್ಯವಾಗಿ ಡಿಫೆಂಡ್ಸ್, ಮತ್ತು ಮಾರ್ಪಡಿಸಲಾಗದಂತೆ ಸ್ನೇಹಿತರಿಗೆ ಮುಂದುವರೆಯುತ್ತದೆ.ನಾನು, ನನ್ನ ಹಿಂದೆ ನಡೆಯಲು ಇಲ್ಲ ನಾನು ದಾರಿ ಇರಬಹುದು, ಅನುಸರಿಸಿ ನನ್ನ ಪಕ್ಕದಲ್ಲಿ ವಲ್ಕ್ ಮಾಡಬಹುದು ನನ್ನ ಸ್ನೇಹಿತ ನನ್ನ ಮುಂದೆ ನಡೆಯಲು ಇಲ್ಲ.ಸ್ನೇಹ, ಅನಗತ್ಯ ತತ್ವಶಾಸ್ತ್ರ ಹಾಗೆ, ಕಲೆ …. ಇದು ಯಾವುದೇ ಬದುಕುಳಿಯುವ ಮೌಲ್ಯವನ್ನು ಹೊಂದಿದೆ; ಬದಲಿಗೆ ಇದು ಬದುಕುಳಿಯುವ ಮೌಲ್ಯವನ್ನು ನೀಡಿ ಆ ವಸ್ತುಗಳ ಒಂದು.

ನಿಮ್ಮ ಕೈ ಹೊಂದಿದೆ ಮತ್ತು ತಪ್ಪು ವಿಷಯ ದೂರ ಆಗಿರುತ್ತದೆ ಒಬ್ಬ ಹೆಚ್ಚು ಹೋಲಿಸಿದರೆ ವಿಷಯವನ್ನು ಮಾಡಲ್ಪಟ್ಟಿದೆ ಹೇಳುತ್ತಾರೆ ಸ್ನೇಹಿತಸ್ನೇಹ ಆ ಕ್ಷಣದಲ್ಲಿ ಹುಟ್ಟಿದ ಒಂದು ವ್ಯಕ್ತಿ ಮತ್ತೊಂದು ಹೇಳುವನು: ‘ಏನು! ನೀನು ಕೂಡಾ? ನಾನು ಒಂದು ಮಾತ್ರ ಭಾವಿಸಿದರುಯಾರೇ ಸ್ನೇಹಿತರಿಗೆ ನೋವುಗಳು ಸಹಾನುಭೂತಿ ಮಾಡಬಹುದು, ಆದರೆ ಇದು ಒಂದು ಸ್ನೇಹಿತನ ಯಶಸ್ಸು ಸಹಾನುಭೂತಿ ಬಹಳ ಸೂಕ್ಷ್ಮ ಪ್ರಕೃತಿ ಅಗತ್ಯವಿದೆ.ಕೆಲವೊಮ್ಮೆ ಸ್ನೇಹಿತ ಎಂದು ಮಾಸ್ಟರಿಂಗ್ ಸಮಯ ಕಲೆ ಅರ್ಥ. ಮೌನ ಒಂದು ಸಮಯವಿದೆ. ಹೋಗಿ ಜನರು ತಮ್ಮ ಗಮ್ಯವನ್ನು ತಾವೇ ಜೋರಾಗಿ ಅವಕಾಶ ಅವಕಾಶ ಒಂದು ಸಮಯ. ಮತ್ತು ಒಂದು ಸಮಯದಲ್ಲಿ ಎಲ್ಲಾ ಮುಗಿಯುವ ತುಣುಕುಗಳನ್ನು ತೆಗೆದುಕೊಳ್ಳಲು ತಯಾರು.ಅನಗತ್ಯ, ತತ್ವಶಾಸ್ತ್ರ ಹಾಗೆ, ಕಲೆ ಸ್ನೇಹ …. ಇದು ಯಾವುದೇ ಬದುಕುಳಿಯುವ ಮೌಲ್ಯವನ್ನು ಹೊಂದಿದೆ; ಬದಲಿಗೆ ಇದು ಬದುಕುಳಿಯುವ ಮೌಲ್ಯವನ್ನು ನೀಡಿ ಆ ವಸ್ತುಗಳ ಒಂದುಸ್ನೇಹಿತರು ನಕ್ಷತ್ರಗಳು ನೀವು ಯಾವಾಗಲೂ ಅವುಗಳನ್ನು ಕಾಣುವುದಿಲ್ಲ ಆದರೆ ನೀವು ಯಾವಾಗಲೂ ತಮ್ಮ ತಿಳಿದಿದೆ.Whatsapp Quotes and Status in Kannada Images DownloadWhatsapp Status in Kannada
Whatsapp Status in Kannada

Whatsapp Status in Kannada
Whatsapp Status in Kannada

Whatsapp Status in Kannada
Whatsapp Status in Kannada

Whatsapp Status in Kannada
Whatsapp Status in Kannada

Whatsapp Status in Kannada
Whatsapp Status in Kannada

Whatsapp Status in Kannada
Whatsapp Status in Kannada
Whatsapp Status in Kannada Video Download

I hope you like this collection of Whatsapp Status in Kannada. 
Share this article on whatsapp and facebook.
Thanks for visiting.

Comments